ತಾನೊಬ್ಬ ಪ್ರವಾದಿಯೆಂದು ನಟಿಸುತ್ತಿದ್ದ ಯೆಹೂದ್ಯ ಅವನು; ಮಾತ್ರವಲ್ಲ, ಅಲ್ಲಿಯ ರಾಜ್ಯಪಾಲನಾಗಿದ್ದ ಸೆರ್ಗ್ಯಪೌಲನ ಪರಿವಾರಕ್ಕೆ ಸೇರಿದ್ದನು. ಈ ರಾಜ್ಯಪಾಲನೊಬ್ಬ ಜ್ಞಾನಿ. ಇವನು ದೇವರವಾಕ್ಯವನ್ನು ಕೇಳಲಪೇಕ್ಷಿಸಿ ಬಾರ್ನಬ ಮತ್ತು ಸೌಲರನ್ನು ಆಹ್ವಾನಿಸಿದನು.